Sunday, December 25, 2016

ಹೊಸತರ ಹೊರತು ಇನ್ನೇನಿಲ್ಲ…

ಹೊಸದೊಂದು ಬರಹ.. 
in2wordsTrainin2wordsTrain
(ಹನಿಗವನವನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ.. ) (ನಿಮ್ಮ ನಿಟ್ಟುಸಿರನ್ನು ಗಮನಿಸಿದೆ.. )
ನಿಮಗೆ ಒಂದು ಜಾಹೀರಾತು ನೆನಪಿರಬಹುದು..
“…ಹೊಸ ಮನೆ, ಹೊಸ ಕಾರು.. ಹೊಸ ಹೆಂಡ್ತಿ?!! ಅದ್ಭುತ!!!! “
in2wordsHome
ಎಲ್ಲವೂ ಹೊಸತರಂತೆ ಕಾಣಿಸುತ್ತಿರಬೇಕು ಎನ್ನುವ ಮಾನವ ಸಹಜ ಹಂಬಲವನ್ನು ವ್ಯಾಪಾರಿಗಳಂತೂ ಚೆನ್ನಾಗಿ ಅರ್ಥೈಸಿಕೊಂಡು ತಮ್ಮ ಉತ್ಪನ್ನಗಳ ಮಾರಾಟದ ಮೂಲ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
“ಹೊಸ ಗಾನ ಬಜಾನ.. ಹಳೇ ಪ್ರೇಮ ಪುರಾಣ..” ಈ ಹಾಡನ್ನು ನೀವು ಕೇಳಿರುತ್ತೀರಿ.. ಇದಂತೂ ನಿಜ.. ಹೊಸ ಹಾಡುಗಳನ್ನು ಕೇಳಿಸಿಕೊಳ್ಳುವ ತವಕ ನನ್ನಲ್ಲಂತೂ ಸದಾ ಇರುತ್ತದೆ..  ಬಹಳಷ್ಟು ಮಂದಿ ಈ ಮಾತನ್ನು ಒಪ್ಪುತ್ತಾರೆ ಸಹ.
in2wordsConfused
“ಹೊಚ್ಚ ಹೊಸ ಚಲನಚಿತ್ರ ನಿಮ್ಮ ಉ**ಯ ಚ್ಯಾನೆಲ್ ನಲ್ಲಿ ಮಾತ್ರ…”  ಹಬ್ಬಕ್ಕೆಂದು ಬಹುತೇಕ ಚ್ಯಾನೆಲ್ಗಳಲ್ಲಿ ಮೊಳಗುವ ರಣಕಹಳೆ ಇದು.. ಹೌದು ಇದು ರಣಕಹಳೆ.. ಯಾರ ವಿರುದ್ಧ ಅಂತೀರಾ? ಇನ್ಯಾರು ನಮ್ಮ ವಿರುದ್ಧವೇ!! ಜಾಹೀರಾತುಗಳ ಮಧ್ಯೆ ಈ ಚಿತ್ರಗಳು ದೀಪಾವಳಿಯ ಟುಸ್ ಪಟಾಕಿಗಳಂತೆ ಆಗಿಬಿಡುತ್ತವೆ.. ಇದು ರಿಮೋಟ್ ಕಂಟ್ರೋಲ್ನ ಜವಾಬ್ದಾರಿ ಹಾಗೂ ಮಹತ್ವಗಳನ್ನು ತಿಳಿಸುತ್ತದೆ ಕೂಡ.
in2wordsBluff
‘ಹೊಸ’ ಬಟ್ಟೆ ತೊಡದಿದ್ದರೆ ಅದೊಂದು ಹಬ್ಬವೇ, ಸುಸಂದರ್ಭವೆ?
in2wordsCandle
‘ಹೊಸ ಮೊಬೈಲ್’ ವರ್ಷಕ್ಕೊಮ್ಮೆಯಾದರೂ ತೆಗೆದುಕೊಳ್ಳದೆ ಇರಲು ಸಾಧ್ಯವೇ? ಅದರ ಆಯಸ್ಸು ಕೂಡ ಅಷ್ಟೇ.. ಕನಿಷ್ಟ ಪಕ್ಷ ಬ್ಯಾಟರೀ ಕೈ ಕೊಡಬಹುದು.. ಇಲ್ಲವೇ ಕೈ ಇಂದ ನಾವೇ ಬೀಳಿಸಬಹುದು!!
in2wordsGift
‘ಹೊಸ’ ಸ್ನೇಹಿತರು ‘ಹೊಸ’ ಪರಿಚಯ ‘ಹೊಸ’ ಕೆಲಸ ‘ಹೊಸ’ ಸ್ಥಳ ‘ಹೊಸ’ ಅನುಭವಗಳು.. ಇವು ವಿಧಿಯ ಚೇಷ್ಟೆಗಳು..ನಡೆಯುತ್ತಿರುತ್ತವೆ..
in2wordsCartoon
‘ಹೊಸ’ ನೋಟು !! ಮರೆಯೋದಾದ್ರೂ ಹೇಗೆ ಹೇಳಿ…
in2wordsNote
ಪಟ್ಟಿ ಬೆಳೆಯುತ್ತಲೇ ಇದೆ.. ನಾನು ಎಷ್ಟೂ ಅಂತ ಲೆಕ್ಕ ಹಾಕ್ಲಿ 🙁
in2wordsStarLR
ಹಳೆಯದೆಲ್ಲವ ಬಿಟ್ಟು ‘ಹೊಸತರೆಡೆಗೆ’ ತುಡಿವುದೆ ಜೀವನ..!! ( ಕನ್ನಡಾನುವಾದ : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ!!)
in2wordsAnts
ಬರುತ್ತಿರವ ‘ಹೊಸ’ ವರ್ಷಕ್ಕೆ ನನ್ನ ಹಾರ್ದಿಕ ಶುಭಾಶಯಗಳು..!!
in2wordsGlobe
ನಿಟ್ಟುಸಿರ ಸರದಿ ನನ್ನದೀಗ!!
– ಗುರುಪ್ರಸಾದ್ ಎಂ ಭಟ್.