Wednesday, August 19, 2015

Patriotic Song (2015) : ಸಾರಿದ್ದಾಯಿತು ಶಾಂತಿಯ ಮಂತ್ರ

ಸಾರಿದ್ದಾಯಿತು ಶಾಂತಿಯ ಮಂತ್ರ
ಬಂದೂಕಿನ ಗುರಿ ವೈರಿಯ ಕಡೆಗೆ..
ಗಡಿಯಲಿ ಹೋರಾಡಲು ಅದೆ ಸ್ಫೂರ್ತಿ
ಹೆಮ್ಮೆಯ ಭಾರತ ವಿಜಯ ಪತಾಕೆ
                                           
ಎಲ್ಲೆಯ ಮೀರುತ ಬರುವ ಶತ್ರುವ
ಬಡಿದೋಡಿಸುವ ಹಬ್ಬವು ಇಲ್ಲಿ..
ಗುಂಡಿಗೆ ಗುಂಡಿಗೆ ನೀಡುವ ಧೈರ್ಯ
ಮಾಡುವ ಸಮರೋತ್ಸಾಹದಲ್ಲಿ..

ಜೀವದ ಹಂಗು ತೊರೆದು ಮಾಡೋ ಕಾಯಕ ನಂದು..
ದೇಶ ಕಾಯುವ ವರವೂ ಇರಲೀ ಇಂದು ಎಂದು.. ||
ಹಗಲು ಇರುಳು ಹಗೆಯು ಇರಲು
ಸಜ್ಜು ನಾವೆಂದೆಂದು..  ಸಜ್ಜು ನಾವೆಂದೆಂದು..

ಎದುರಲಿ ಸಾವು ಬದುಕಿನ ನಡುವೆ ಹೋರಾಡಲು ಸನ್ನಧ್ಧ..
ಮನದಲಿ ಮನೆಯಲಿ ಕಾದಿರುವವರ ನೆನಪೂ ಮಾಡುವ ಯುದ್ಧ .. ||

ಹರಿಯಿತು ದೇಹದಿ ಮಿಂಚು ಬಯಲಾಯ್ತು ವೈರಿಯ ಸಂಚು..
ಹರಿಯಿತು ದೇಹದಿ ಮಿಂಚು ಬಯಲಾಯ್ತು ವೈರಿಯ ಸಂಚು..
ಕಟ್ಟಕಡೆಯ ವೈರಿಯ ಕೊಲ್ಲುವ ತನಕ ಹೋರಾಟ..

ಜೀವದ ಹಂಗು ತೊರೆದು ಮಾಡೋ ಕಾಯಕ ನಂದು..
ದೇಶ ಕಾಯುವ ವರವೂ ಇರಲೀ ಇಂದು ಎಂದು.. ||
ಹಗಲು ಇರುಳು ಹಗೆಯು ಇರಲು
ಸಜ್ಜು ನಾವೆಂದೆಂದು..  ಸಜ್ಜು ನಾವೆಂದೆಂದು..
ಸಜ್ಜು ನಾವೆಂದೆಂದು..

Video Link:  http://2words.wix.com/2words#!premier/ccy0
YouTube : https://www.youtube.com/watch?v=mho2fvNIBMk