| ಮುಗಿಲನೆ ಬಳಸಲು..ಹೊರಟಿರುವ ಎಲೆಗಳು... |
ಈ ಒಲವ ಬಣ್ಣಿಸಲು..
ಕನ್ನಡ ಎಂಬ ಪದವೊಂದೆ ಸಾಕು..
ಈ ಚಳಿಯ ನಡುಗಿಸಲು..
ಇಂದು ಕರುನಾಡಿಗೆ ಮಳೆಯೂ ತಂಪೆರದಿದೆ..
ಆದರೂ ಕನ್ನಡದ ಕಿಚ್ಚು ಹಾಗೆ ಬೆಚ್ಚಗಿದೆ..
ಮಳೆಯಲ್ಲೂ ಉರಿಯುವುದು ಆದಾಗ ಜ್ವಾಲೆ..
ಕನ್ನಡಾಂಬೆಗೆ ಅರ್ಪಣೆ ಒಲವು ತುಂಬಿದ ಜಯಮಾಲೆ...
ಆಗಲಿ ಪ್ರಳಯ.. ಹೆದರದು ಈ ಹೃದಯ...
ನಮ್ಮಲ್ಲಿದೆ ಕನ್ನಡವಾಡಿದ ತೃಪ್ತಿ, ಮತ್ತೊಮ್ಮೆ ಶುಭಾಷಯ... :)